ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಗ ವಿನೀಶ್ ದರ್ಶನ್ ಸಾಧನೆ ಅಪಾರ | Filmibeat Kannada

2017-12-02 7

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಗ ವಿನೀಶ್ ಸಾಧನೆ ಅಮೋಘ. ಚಾಲೆಂಜಿಂಗ್ ಸ್ಟಾರ್ ದರ್ಶನ್.... ಕನ್ನಡ ಸಿನಿಮಾರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಅಂತಾನೇ ಕರೆಸಿಕೊಳ್ಳುವ ಖ್ಯಾತ ನಟ. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಕ್ಷೇತ್ರಗಳಲ್ಲೂ ತಮ್ಮನ್ನ ತಾವು ತೊಡಗಿಸಿಕೊಂಡಿರೋ ನಟ. ಕಷ್ಟದ ದಿನಗಳನ್ನ ಮೆಟ್ಟಿನಿಂತು ಅದ್ಭುತವಾದ ಯಶಸ್ಸು ಪಡೆದುಕೊಂಡಿರುವ ಚಾಲೆಂಜಿಂಗ್ ಸ್ಟಾರ್ ಹಾದಿಯಲ್ಲೇ ಮಗ ವಿನೀಶ್ ನಡೆಯೋದಕ್ಕೆ ಪ್ರಾರಂಭ ಮಾಡಿದ್ದಾರೆ. ಪುಟ್ಟವಯಸ್ಸಿನಲ್ಲೇ ಅದ್ಭುತ ಸಾಧನೆ ಮಾಡಿರುವ ದರ್ಶನ್ ಪುತ್ರ ವಿನೀಶ್ ಮುಂದಿನ ದಿನಗಳಲ್ಲಿ ತಂದೆಯಂತೆ ಸಾಧನೆ ಮಾಡೋದ್ರಲ್ಲಿ ಅನುಮಾನವಿಲ್ಲ. ಅಷ್ಟಕ್ಕೂ ವಿನೀಶ್ ಮಾಡಿರುವ ಅಂತಹ ಸಾಹಸವಾದರೂ ಏನು ಅಂತೀರಾ ? ಕರಾಟೆ ಕಿಂಗ್ ಆದ ಜ್ಯೂನಿಯರ್ ಚಾಲೆಂಜಿಂಗ್ ಸ್ಟಾರ್. ವಿನೀಶ್... ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಜಯಲಕ್ಷ್ಮೀ ರವರ ಏಕೈಕ ಪುತ್ರ. ಇಷ್ಟು ದಿನ ದರ್ಶನ್ ಸಾಧನೆಯನ್ನ ಕೊಂಡಾಡುತಿದ್ದ ಅಭಿಮಾನಿಗಳು ಈಗ ದರ್ಶನ್ ಪುತ್ರರನ್ನೂ ಮೆಚ್ಚಿಕೊಳ್ಳುವ ಸಂದರ್ಭ ಬಂದಿದೆ. ವಿನೀಶ್ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
Kannada Actor Challenging star Darshan and Vijayalakshmi's son Vineesh won gold medal in Karate Competition.

Videos similaires